Tuesday, March 23, 2010

ವಿರಹ ಗೀತೆ

ಕರಣ ಹೇಳು ನೀ ನಿನ್ನಯ ಮೋಸಕೆ
ಉತ್ತರ ಹೇಳು ನೀ ನನ್ನಯ ಪ್ರಶ್ನೆಗೆ
ಹೀಗೇಕೆ ನೀನು ಎನ್ನ ತೊರೆದು ದೂರವಾದೆ

ನೋವಿನ ಮಡಿಲಲಿ ನನ್ನನು ದೂಡಿದೆ
ದುಖದ ಕಡಲಲಿ ನನ್ನನು ನೂಕಿದೆ
ಶಂಕೆಯೇ ಕೋಪವೇ ಏನ್ನ ಪ್ರೀತಿಯ ಮೇಲೆ
ಕರಣ ಹೇಳು ನೀ ನಿನ್ನಯ ಮೋಸಕೆ
ಉತ್ತರ ಹೇಳು ನೀ ನನ್ನಯ ಪ್ರಶ್ನೆಗೆ


ಮರೆತೇ ಏನು ಅಂದಿನ ಪ್ರೀತಿಯ ಭಾಷೆಗಳು
ತೊರೆದೆ ಏನು ನನ್ನಯ ಪ್ರೀತಿಯ ಆಣೆಗಳ
ದ್ವೇಶವೇ ಬೆಗುದಿಯೇ ಎನ್ನ ಪ್ರೀತಿಯ ಮೇಲೆ
ಕರಣ ಹೇಳು ನೀ ನಿನ್ನಯ ಮೋಸಕೆ
ಉತ್ತರ ಹೇಳು ನೀ ನನ್ನಯ ಪ್ರಶ್ನೆಗೆ
ಹೀಗೇಕೆ ನೀನು ಎನ್ನ ತೊರೆದು ದೂರವಾದೆ




Monday, July 13, 2009

हिन्दी सोंग

तुमसे मिलने के लिए में तैयार बैटा हूँ ओहः जानेजा
तुमसे घुलने के लिए में तैयार बैटा हूँ ओहः जानेजा

जबसे तुझको देखा है दीवाना हुवा है दिल मेरा ओहः जानेजा
हर दम मेरा साँस तो तेरा नाम ही पुकारता है ओहः जानेजा

दिलभर अपने दिलको तुम मुजको सौन्पदो ओहः जानेजा
प्यार तुजसे करता हूँ तुम भी मुझसे करोना प्यार जानेजा

तू ना मिली इस जिंदगी में तो में जिंदा ना बचूंगा ओहः जानेजा
तेरे प्यार से भरदो मेरा सुना जीवन मेरे हमदम मेरे जानेजा

Tuesday, June 23, 2009

ಐಟಂ ಗೀತೆ -೪

ಕುಂಟಾಟ ಓಡಾಟ ಎಲ್ಲಾನು ಬಿಟ್ಟಾಯ್ತು
ಚೆಲ್ಲಾಟ ಮುದ್ದಾಟ ಬರಿ ಅದನೆ ಕಲೆತಾಯ್ತು
ಆಸೆಯ ಮೊಗ್ಗಿಂದು ಅರಳಿದ ಹೂವಾಯ್ತು
ಚಿಗುರಿನ ವಾಯಸಿಂದು ಬಲಿತ ಹೆಮ್ಮರವಾಯ್ತು
ಏನಿದು ನನಗಾಯಿತು, ನನಗೆನೇನೋ ಆಗೆ ಹೂಯ್ತು

ಬಣ್ಣದ ಚಿತ್ತಾರ ಮನದಲ್ಲಿ ಮೂಡಾಯ್ತು,
ಪ್ರೇಮದ ಆಸರೆ ಅನುದಿನವು ಹೊಸದಾಯ್ತು
ಬಾಬಾರೋ ನನ್ನ ನಲ್ಲ ನಿನ್ನ ಮೇಲೆ ಮನಸಾಯ್ತು,
ನಂದೆಲ್ಲ ನಿನಗೀಗ ಒಲವಿನ ಮುಡಿಪಾಯ್ತು
ಏನಿದು ಜ್ವರವೇರಿತು, ನನಗೀಗ ನಷೆಯಾಯಿತು

ಬಿಟ್ಟರೆ ಸಿಗದಿನ್ನೆಂದು ಇಂತಹ ಆನಂದ,
ಹಿಡಿ ಹೊನ್ನು ಸಿಕ್ಕಹಂಗೆ ಸಿಕ್ಕರೆ ನನ್ನ ಚೆಂದ
ಬಿಡಬೇಡ ಸಿಕ್ಕಾಗ ಮುಡಿಪಿನ ಮಕರಂದ,
ಮತ್ತಿನ ಹೊಳೆಯಂತೆ ಚೆಲುವಿನ ನನ್ನ ಅಂದ
ಏನಿದು ನಿನಗೆನಾಯಿತು, ನನ್ನಾಸೆ ನಿನಗೆ ಹೆಚ್ಚಾಯಿತು

Friday, June 19, 2009

ಯುಗಳ ಗೀತೆ ೧೧

ಓ........... ಪ್ರೇಮ ನೀನೇಕೆ ಹೀಗೆ ಕಲ್ಲಾಗಿರುವೆ
ಮನದನ್ನೆ ಹೋದಂದೆ ನೀ ಮಿಡಿಯದಾಗಿರುವೆ
ಜೊತೆಗಾರ್ತಿಯಾ ಅಗಲಿ ಹೇಗೆ ನಾ ಬದುಕಿರಲಿ ............ಹೇಳು ಹೇಳು ನೀ ಹೇಳು

ಸಂಕಟದ ಮಡುವಲ್ಲಿ ಮನೆ ಮಾಡಿ ನೋವಿಗೆ ಅಂಜಿದೊಡೆ ಜೀವ ನಲುಗದಿರದೆ ಹೇಳು
ಚಿಂತೆಯ ಚಿತೆಯಲ್ಲಿ ಸುಡುವಾಗ ಮನಸಿ೦ದು ನರಳಾಡದೆ ನನಗಿಂದು
ಬೇಡವೆಂದರೂ ಬರುವುದು ಮನಕೆ ವಿಷಾದ - ಬೇಕೆಂದರು ಸಿಗದು ಮನಕೆ ಉಲ್ಲಾಸ
ಜೊತೆಗಾರ್ತಿಯಾ ಅಗಲಿ ಹೇಗೆ ನಾ ಬದುಕಿರಲಿ ............ಹೇಳು ಹೇಳು ನೀ ಹೇಳು
ಓ........... ಪ್ರೇಮ ನೀನೇಕೆ ಹೀಗೆ ಕಲ್ಲಾಗಿರುವೆ
ಮನದನ್ನೆ ಹೋದಂದೆ ನೀ ಮಿಡಿಯದಾಗಿರುವೆ

ದುಗುಡದ ನಗರಕ್ಕೆ ಒಡೆಯನಾಗಿಸಿ ನನ್ನ , ಶತಮಾನದ ನೋವನ್ನು ಮುಡಿಪಾಗಿಸಿ ನನಗೆ
ದೂರದ ಊರಿಗೆ ಪಯಣವ ಬೆಳೆಸುತ್ತ ತೊರೆದೆನ್ನ ಮಿಲನವನು ಕಡೆಗಣಿಸಿದೆ ನೀನಿಂದು
ಎನ್ನ ಆಸೆಗೆ ಒಲಿದು ಬರಲಾರೆಯ ನೀನಿಂದು - ಕೂಗಿದರು ಕೇಳಿಸದೆ ಎನ್ನ ಕರೆ ನಿನಗಿಂದು
ಜೊತೆಗಾರ್ತಿಯಾ ಅಗಲಿ ಹೇಗೆ ನಾ ಬದುಕಿರಲಿ ............ಹೇಳು ಹೇಳು ನೀ ಹೇಳು
ಓ........... ಪ್ರೇಮ ನೀನೇಕೆ ಹೀಗೆ ಕಲ್ಲಾಗಿರುವೆ
ಮನದನ್ನೆ ಹೋದಂದೆ ನೀ ಮಿಡಿಯದಾಗಿರುವೆ


ನೋವು ದುಖ ಹತಾಶೆ ದುಗುಡ ಸಂಕಟ

Thursday, June 18, 2009

ಐಟಂ ಗೀತೆ ೩

ನಲ್ಲನೆ ಸವಿ ನಲ್ಲನೆ ಹಿತ ನೀಡು ಬಾ ನೀ ಮೆಲ್ಲನೆ
ಕಳ್ಳನೇ ನೀ ಕಳ್ಳನೇ ಮನವನ್ನು ಕದ್ದೆ ನೀ ಮೆಲ್ಲನೆ
ನಲ್ಲನೆ ಸವಿ ನಲ್ಲನೆ ಹಿತ ನೀಡು ಬಾ ನೀ ಮೆಲ್ಲನೆ
ಕಳ್ಳನೇ ನೀ ಕಳ್ಳನೇ ಮನವನ್ನು ಕದ್ದೆ ನೀ ಮೆಲ್ಲನೆ
ಅಹಾ ನಲ್ಲನೆ ಸವಿ ನಲ್ಲನೆ

ಮುದ ನೀಡದೆ ಈ ರಂಜನೆ
ಮನದಾಳಕೆ ನಿನ್ನ ಕೆಣಕದೆ ನಾ ಬಿಡುವೆನೆ
ನನ್ನ ಅಂದ ಚೆಂದಕ್ಕೆ ನಿನ್ನ ಆಸೆ ತಂದಿತ್ತ
ಹಸಿ ಬಿಸಿ ತುಮುಲವನು ನಾ ಅರಿಯೆನೆ
ಅಹ ನಲ್ಲನೆ ಸವಿ ನಲ್ಲನೆ ಹಿತ ನೀಡು ಬಾ ನೀ ಮೆಲ್ಲನೆ
ಕಳ್ಳನೇ ನೀ ಕಳ್ಳನೇ ಮನವನ್ನು ಕದ್ದೆ ನೀ ಮೆಲ್ಲನೆ


ಅನುರಾಗ ಬಯಸಿದೆ ನಿನ್ನನೆ
ಬರಿ ಪ್ರೇಮಕೆ ಹಿತ ಮಾತಿಗೆ ನಾ ಒಲಿವೆನೆ
ನನ್ನ ಒನಪು ವೈಯಾರ ಯೌವನದ ಮೈಭಾರ
ಸವಿಯಲು ಬಾರೋ ನೀ ಬೇಗನೆ
ಅಹ ನಲ್ಲನೆ ಸವಿ ನಲ್ಲನೆ ಹಿತ ನೀಡು ಬಾ ನೀ ಮೆಲ್ಲನೆ
ಕಳ್ಳನೇ ನೀ ಕಳ್ಳನೇ ಮನವನ್ನು ಕದ್ದೆ ನೀ ಮೆಲ್ಲನೆ

Thursday, November 13, 2008

ಯುಗಳ ಗೀತೆ - ೧೦

ನಿನ್ನ ನನ್ನ ತುಟಿಗಳ ಮೇಲೆ ಮಧುರ ಪ್ರೇಮ ಗೀತೆ ಇನಿಯ
ಮುಂದೆ ಮುಂದೆ ನಾವು ಹಿಂದೆ ಹಿಂದೆ ಪ್ರೀತಿ ಇನಿಯ

ಮೊದಲ ಮಧುರ ಮೈತ್ರಿಯ ಮೊದಲ ರಾತ್ರಿ ನೆನಪಳುಲಿವುದು
ಹೂವುಗಳ ನಗರದಲ್ಲಿ ಕಳೆದ ಕ್ಷಣವ ಹೇಗೆ ಮರೆವುದು
ಹೀಗೆ ನಲಿಯುತ ಜೀವನವ ಕಳೆವ ಇನಿಯ
ಮುಂದೆ ಮುಂದೆ ನಾವು ಹಿಂದೆ ಹಿಂದೆ ಪ್ರೀತಿ ಇನಿಯ

ಕಣ್ಗಳಲಿ ನೀ ನೆಲೆಸು ರೆಪ್ಪೆಗಳಲಿ ಮುಚ್ಚಿಕೊಳ್ಳುವೆ
ಮೊದಲು ನಿನ್ನ ಕಂಗಳೊಡನೆ ನಾನು ಸ್ವಲ್ಪ ಮಾತನಾಡುವೆ
ಇಲ್ಲೇ ನಮ್ಮ ಇಡಿ ಜೀವನ ಸವೆಸುವ ಬಾರೋ ಇನಿಯ
ಮುಂದೆ ಮುಂದೆ ನಾವು ಹಿಂದೆ ಹಿಂದೆ ಪ್ರೀತಿ ಇನಿಯ



Sunday, October 19, 2008

ಯುಗಳ ಗೀತೆ - ೯

ಹೇಳು ಏತಕೆ ಜೀವ ನೊಂದಿದೆ
ಹೇಳು ಏತಕೆ ಮೊಗವು ಬಾಡಿದೆ
ಹೇಳು ಎನ್ನ ಮನದನ್ನೆ - ಹೇಳು ನಿನ್ನ ಚಿಂತೆ

ಹರಳು ಬಿದ್ದ ಒಡವೆಯಂತೆ
ಹೆರಳು ತೆಗೆದ ಸುಕೇಶಿನಿಯಂತೆ
ಕುಂದಿದೆ ಕಳೆಯು ಇಂದು
ಹೇಳು ಎನ್ನ ಮನದನ್ನೆ - ಹೇಳು ನಿನ್ನ ಚಿಂತೆ

ಹೊನಲು ಬೆಳಕ ಚಂದ್ರಮನುಂಟು
ಮುದವ ತರುವ ಭೋಜನವುಂಟು
ಮುದಿಸದು ನಿನ್ನನು ಏನೂ
ಹೇಳು ಎನ್ನ ಮನದನ್ನೆ - ಹೇಳು ನಿನ್ನ ಚಿಂತೆ

ಸ್ವರ್ಗ ಸುಖವ ಕಂಡೆನು ಇಲ್ಲಿಯೆ ನಾನು
ಮನವನರಿತ ಗೆಳೆಯನು ನೀನು
ದೂರಲು ಏನಿದೆ ಚಿಂತೆ
ಏನು ಇಲ್ಲ ಇನಿಯ - ಎನ್ನ ಮನದ ಒಡೆಯ